ನೊರ್ಮಾ ಅಲ್ವಾರೆಸ್ ಒಬ್ಬ ಭಾರತೀಯ ಸಮಾಜ ಸೇವಕಿ, ಪರಿಸರವಾದಿ, ವಕೀಲೆ ಮತ್ತು ಪರಿಸರ ಕ್ರಿಯಾ ಸಮೂಹವಾದ ಗೋವಾ ಫೌಂಡೇಶನ್‌ನ ಸ್ಥಾಪಕ ಸದಸ್ಯೆ. == ಓದು == ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಕಾನೂನು ಪದವಿ ಪಡೆದರು. == ಪರಿಸರವಾದಿಯಾಗಿ == ಪದವಿ ಪಡೆದ ನಂತರ ಪರಿಸರ ಸಂಬಂಧೀ ಚಳುವಳಿಗಳಿಗೆ ಧುಮುಕಿದರು. ಗೋವಾ ಫೌಂಡೇಶನ್‌ನ ಆಶ್ರಯದಲ್ಲಿ, ಅವರು 1987 ರಲ್ಲಿ ಗೋವಾದ ಮರಳು ದಿಬ್ಬಗಳನ್ನು ಉಳಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪ್ರಾರಂಭಿಸಿದರು. ಹೀಗೆ ಅವರು 100 ಕ್ಕೂ ಹೆಚ್ಚು ಪಿಐಎಲ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ . ಅಮಿಕಸ್ ಕ್ಯೂರಿಯಂತೆಯೂ ಸೇವೆ ಸಲ್ಲಿಸಿದ್ದಾರೆ. ಡುಪಾಂಟ್ ಕಾರ್ಖಾನೆಯನ್ನು ನಿರ್ಬಂಧಿಸಲು ಅನುಕೂಲಕರ ನ್ಯಾಯಾಲಯದ ಆದೇಶವನ್ನು ಗೆಲ್ಲುವಲ್ಲಿ ಮತ್ತು ಗೋವಾದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿರ್ಬಂಧಿಸಿದ ಕೆಲಸಗಳ ಕುರಿತು ಅವರ ಪ್ರಯತ್ನಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರು ಪೀಪಲ್ ಫಾರ್ ಅನಿಮಲ್ಸ್ (ಪ್ರಾಣಿ ಬೆಂಬಲ ಗುಂಪು) ನ ಅಧ್ಯಕ್ಷರಾಗಿದ್ದಾರೆ ಮತ್ತು ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಅದರ್ ಇಂಡಿಯಾ ಬುಕ್ ಸ್ಟೋರ್ ಮತ್ತು ಅದರ್ ಇಂಡಿಯಾ ಪ್ರೆಸ್ ನ ಸ್ಥಾಪಕರಾಗಿದ್ದಾರೆ. == ಜೀವನ == ಅಲ್ವಾರೆಸ್ ಅವರು ಪ್ರಸಿದ್ಧ ಪರಿಸರ ಕಾರ್ಯಕರ್ತ ಕ್ಲೌಡ್ ಅಲ್ವಾರೆಸ್ ಅವರನ್ನು ವಿವಾಹವಾದರು ಮತ್ತು ದಂಪತಿಗಳು ಗೋವಾದ ಪರ್ರಾದಲ್ಲಿ ತಮ್ಮ ಮೂವರು ಮಕ್ಕಳಾದ ರಾಹುಲ್, ಸಮೀರ್ ಮತ್ತು ಮಿಲಿಂದ್ ಅವರೊಂದಿಗೆ ವಾಸಿಸುತ್ತಿದ್ದಾರೆ. == ಪ್ರಶಸ್ತಿಗಳು == ೨೦೦೨ರಲ್ಲಿ, ಭಾರತ ಸರ್ಕಾರ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನಿತ್ತು ಗೌರವಿಸಿತು ೨೦೦೧ರಲ್ಲಿ, ಗೋವಾ ಸರ್ಕಾರವು ರಲ್ಲಿ ಅಲ್ವಾರೆಸ್‌ಗೆ ಯಶಾದಾಮಿನಿ ಪುರಸ್ಕಾರ್ ಅನ್ನು ನೀಡಿ ಅವರನ್ನು ಗೌರವಿಸಿತು. == ಉಲ್ಲೇಖಗಳು ==